Skip to main content

Posts

Showing posts from April, 2017

ಆ ಮನೆ

ಮನೆಯ ಗೇಟಿನ ಮೇಲೆ ತಲೆಯಿಟ್ಟು ಎಡಗಡೆ ನೋಡಿದರೆ ಆ ಹಸಿರು ಬಣ್ಣದ ಹೆಂಚಿನ ಮನೆ ನನ್ನ 13 ವರ್ಷ ಹಿಂದಕ್ಕೆ ತಳ್ಳುತ್ತದೆ. ಆಗ ಇನ್ನೂ ಪ್ರೈಮರಿ ದಾಟಿರದಿದ್ದರೂ ನನ್ನ ಮನಸಲ್ಲಿ ನನ್ನಷ್ಟು ಬುದ್ಧಿವಂತೆ ದೊಡ್ಡವರೂ ಇಲ್ಲ. ಅದಕ್ಕೇ ನಾನು serious. ಜಾಸ್ತಿ ಮಾತಿಲ್ಲ, ನಗುವಿಲ್ಲ. ಎಲ್ಲಿ ಅಕ್ಷರ ಕಂಡರೂ ಅದನ್ನು ಮೆದುಳೆಂಬ ಚೀಲದೊಳಗೆ ತುಂಬಿಸದೆ ಬಿಡುತ್ತಿರಲಿಲ್ಲ. ಆ ಮನೆ ನನಗೆ ಕಲಿಸಿದ್ದು ಚಿನ್ನಿದಾಂಡು, ಯೋಗ; ಕೊಟ್ಟದ್ದು ಇಬ್ಬರು ಅದ್ಭುತ ಟೀಚರುಗಳ ಅಕ್ಕರೆ, ಪುರಾಣಗಳ ಪರಿಚಯ. ಬೆಳಗೆದ್ದು ಕಿಟಕಿ ಹತ್ತಿರ ಬಂದರೆ ಹೊರಗೆ ಗುಲಾಬಿ ಬಣ್ಣದ ಬೋಗನ್ ವಿಲ್ಲಾದ ಆವರಣ. ಅಲ್ಲಿಂದಲೇ ಮಲ್ಲಿಗೆಯ ನಗು. ಮನೆಯೆದುರು ಬಾವಿ ಕಟ್ಟೆಯ ಮೇಲೆ ಬದುಕಿಸಲೇಬೇಕೆಂದು ಪಣ ತೊಟ್ಟು ಬಾಟಲಿಯೊಳಗೆ ನೀರು ತುಂಬಿಸಿ ನಾನಿಟ್ಟ ಲಿಲ್ಲಿ ಹೂವು. ಮನೆ ಪಕ್ಕದಲ್ಲೇ ಇರುವ ದೇವಸ್ಥಾನದ ಮೇಲೆ ಹಿಂಡು ಹಿಂಡು ಪಾರಿವಾಳಗಳು. ಆಟ ಆಡಿ ಬೋರಾದಾಗ ತಿನ್ನುವ ಹುಳಿ ಬಿಂಬಳಿಕಾಯಿ. ನಿಧಾನ ಹೋದರೆ ಆಗ ಈ ರಸ್ತೆಯಲ್ಲೆಲ್ಲ ತುಂಬಿದ್ದ ಹುಚ್ಚರು ಸಿಗುತ್ತಾರೆಂದು ಮನೆಯಿಂದ ಶಾಲೆವರೆಗೂ ಒಂದೇ ಓಟ. ಆ ಮನೆಯಲ್ಲಿ ಕಳೆದ ದಿನಗಳು ಈಗ nostalgic.  ಇಷ್ಟು ವರ್ಷಗಳ ನಂತರ ಮದುವೆಯಾಗಿ ಬಂದದ್ದೂ ಆ ಮನೆಯ ಎದುರಿಗೆ. ಅಲ್ಲಿನ ನೆನಪುಗಳಿಗೆ. ರಜೆ ಸಿಕ್ಕರೆ, ಮಾವ ಅಥವಾ ಚಿಕ್ಕಮ್ಮಂದಿರು ಬಂದರೆ ಒಂದು ಗಂಟೆ ದೂರದಲ್ಲಿದ್ದ ಅಜ್ಜನ ಮನೆಗೆ ಹೋಗುವ ಉತ್ಸಾಹ. ಆಗೆಲ್ಲ ಮಳೆ ಏನೂ ಅಲ್ಲ. ಅದರಲ್ಲೇ ಬಸ್