Skip to main content

Posts

Showing posts from May, 2017

ಮಳೆ ಬಂತು

ಒಂದು ಹಳದಿ ಮುದಿ ಎಲೆ ಕೆಳಗೆ ಬೀಳಲೂ ಕೂಡದು ಎನ್ನುವ ಹಾಗೆ ಮೆಲ್ಲನೆ ಅಂಗಳಕ್ಕಿಳಿಯಿತು. ಅದೇ ಒಣ ತೆಂಗಿನಕಾಯಿಗಳು ಪಟ ಪಟ ಕೆಳಗೆ ಹಾರಿ ದಾರಿಯಲ್ಲಿ ಹೋಗುತ್ತಿದ್ದವರನ್ನೆಲ್ಲ ಹೆದರಿಸಿ ಓಡಿಸಿದವು. ಮರಗಳೆಲ್ಲ ತಟಸ್ಥ. ನೀನು ಬಂದರೆಷ್ಟು ಬಿಟ್ಟರೆಷ್ಟು ಅನ್ನುವ ಹಾಗೆ. ಒಳಗೊಳಗೇ ಬರದೇ ಇದ್ದರೆ ಅನ್ನುವ ದುಗುಡ ಬೇರೆ. ಆದರೂ ಪುಟ್ಟ ಪುಟ್ಟ ಹನಿಗಳನ್ನೆಲ್ಲ ಮೆಲ್ಲಗೆ ಮೊದಲು ಕಳಿಸಿ, ನಂತರ ನೆಲಕ್ಕೆ ಅಪ್ಪಳಿಸಿದವು ದೊಡ್ಡ ದೊಡ್ಡ ಹನಿಗಳು. ಗದ್ದಲದ ಮೆರವಣಿಗೆಯಲ್ಲಿ ಬಂದ ಮಳೆ ನೋಡುತ್ತಾ ಅನ್ನಿಸಿದ್ದು ಈ ಸಲದ ಮಳೆಗಾಲವೇ ವಿಚಿತ್ರ. ಈ ಭೂಮಿಯನ್ನು ತಂಪು ಮಾಡಲು ಇನ್ನೆಷ್ಟು ಮೋಡ ಕರಗಬೇಕೋ. ಇನ್ನು ಮೇಲೆ ಹೀಗೇನೋ.