Skip to main content

Posts

Showing posts from December, 2019
ಒಂದು ಕಾಲವಿತ್ತು. ನನ್ನ ಕಾಲೇಜಿನ ಸಹಪಾಠಿಗಳು ನನ್ನನ್ನು ಅವರ ಲೋಹಿಯಾ ಮಾರ್ಗಕ್ಕೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದರೂ ನನ್ನ ದೃಷ್ಟಿ ವಿರುದ್ಧ ದಿಕ್ಕಿನಲ್ಲಿ. ಆದರೆ ನನ್ನದೇ ಕೆಲವು ಸಿದ್ಧಾಂತಗಳಿದ್ದವು. ಅದರಲ್ಲಿ ಒಂದು ಮಠಗಳ ಸ್ವಾಮೀಜಿಗಳ ಕಾಲಿಗೆ ಬೀಳುವುದಿಲ್ಲ ಅನ್ನುವುದು. ಅವರೆಲ್ಲ ಗುರುಗಳಿರಬಹುದು, ಆದ್ದರಿಂದ ಗೌರವಕ್ಕೆ ಅರ್ಹರಿರಬಹುದು. ಆದರೆ I was too proud. ಅದು ಆ ವಯಸ್ಸಿನಲ್ಲಿ ನಮಗಂಟಿಕೊಳ್ಳುವ ಸಮಾಜವಾದದ ಪ್ರಭಾವವೋ ಏನೋ. ಅದರ ಪಳೆಯುಳಿಕೆ ಈಗ ಸ್ವಲ್ಪ ವರ್ಷಗಳವರೆಗೆ ಇತ್ತು. ಹಾಗಾಗೇ ಅಪ್ಪ ಎಷ್ಟು ಸಲ ಪೇಜಾವರ ಸ್ವಾಮೀಜಿಯನ್ನು ಭೇಟಿ ಮಾಡಲು ಕರೆದಾಗಲೂ ನಾನು ಹೋಗಲಿಲ್ಲ. ಸ್ವಾಮೀಜಿ ಎಂದಲ್ಲದಿದ್ದರೂ, ಗುರು ಎಂದಲ್ಲದಿದ್ದರೂ, ಅವರು ಪೂರ್ವಾಶ್ರಮದಲ್ಲಿ ನನ್ನ ಅಜ್ಜಿಯ ತಮ್ಮ ಅಂದರೆ ನನಗೆ ಅಜ್ಜ ಎಂದಾದರೂ ಹೋಗಬೇಕಿತ್ತು. ಅವರ ಬಗ್ಗೆ ಅಪ್ಪ ಬರೆದ ಪುಸ್ತಕವನ್ನು ಇಂಗ್ಲೀಷಿಗೆ ಭಾಷಾಂತರಿಸುವಾಗಲೇ ನನಗೆ ಗೊತ್ತಾಗಿದ್ದು ಅವರ ಚಟುವಟಿಕೆಯ, ಲವಲವಿಕೆಯ, ಕರುಣೆಯ ಮನಸ್ಸಿನ ಬಗ್ಗೆ, ಅವರ ಹೋರಾಟಗಳ ಬಗ್ಗೆ. ಅವರ ಚೈತನ್ಯದ ಬಗ್ಗೆ. ಮತ್ತೆ ಅವರನ್ನು ಭೇಟಿ ಮಾಡಲು ಆಗಲೇ ಇಲ್ಲ. Now it's too late. ಈಗ ನನಗನ್ನಿಸ್ತಾ ಇದೆ, ನಾನೆಂತ fool ಅಂತ,  ಏನನ್ನು ಕಳಕೊಂಡೆ ಅಂತ. ಈ ವಿಷಾದ ಇನ್ನು ನನಗಂಟಿಕೊಂಡು ಯಾವತ್ತೂ ಪ್ರತಿ ಹೆಜ್ಜೆಯಲ್ಲೂ ನನ್ನನ್ನು ನಾನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೇನೋ. 

Ideology

Why is it that ideology is almost always at crosshairs with reality? Is a person's ideology just a remnant of his education and reading, which in turn are figments of someone else's imaginations? Why is it that a person's ideological thoughts are praised to the high skies but derided when he tries to bring them to action? Why is it that one person's ideology becomes another's nightmare?