ಕಡಲತೀರದ ನಕ್ಷತ್ರರಾಶಿ ನೋಡಿ ಇವತ್ತು ಅನ್ನಿಸಿದ್ದು, ಈ ನಕ್ಷತ್ರಗಳೆಲ್ಲ ನಿಂತಲ್ಲಿ ನಿಲ್ಲದೆ ದಿನದಿನ ಚಲಿಸುತ್ತಿದ್ದರೆ ಆಗ ನೂರಾರು ವರ್ಷಗಳ ಹಿಂದಿನ ಸಮುದ್ರಯಾನ ಸಾಧ್ಯವಿರುತ್ತಿರಲಿಲ್ಲ. ಅಂದರೆ ವಾಸ್ಕೋ ಡ ಗಾಮ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿಯುತ್ತಿರಲಿಲ್ಲ. ಅಂದರೆ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮತ್ತಿತರರು ಭಾರತಕ್ಕೆ ಬರುತ್ತಿರಲಿಲ್ಲ. ನಮ್ಮ ದೇಶದ ಇತಿಹಾಸ ಆಗ ಹೇಗಿರುತ್ತಿರಬಹುದು? ಸಣ್ಣ ಸಣ್ಣ ರಾಜರ ಒಳಜಗಳಗಳ ಮಧ್ಯೆ ಹೊರಗಿನವರು ಬಂದೇ ಬರುತ್ತಿದ್ದರು. ಆದರೆ ಸ್ವಲ್ಪ ತಡವಾಗಿ. ಈಗಿನ ಭಾರತ ಹೇಗಿರುತ್ತಿತ್ತು? ಅಖಂಡವಾಗಿಯೋ ? ಅಥವಾ... ಊಹಿಸಿಕೊಳ್ಳಲು ಹೋದರೆ ತರತರದ ಸಾಧ್ಯತೆಗಳು.
Fleeting thoughts in snippets.