Skip to main content

Posts

Showing posts from October, 2016

Disintegration of society

We fear the society and live by its rules, sacrificing our true self. How will the world be if there is no society? I believe we are seeing it in several countries. The disintegration of society in its true sense. Not many are aware of who their neighbours are, nor do they care to know; let alone worry about what they will think about us. This disintegration of societal form of life will slowly create a chasm in human relations. But it has its good point: when people stop being self-conscious, they become truly free -- to follow their dreams, to follow their passions, to LIVE their life. 
What is unfair to us, may be fair to somebody else. What may hurt us, may bring a smile on somebody else's face. What is truth to us, may be untruth to somebody else.

Chained

Bob Dylan says no one is free, even the birds are chained to the sky. Reading it, I thought, wow what an imagination ! And we are chained to ourselves.

ಕತ್ತಲ ನೆನಪು

ತುಂಬ ದಿನಗಳ ನಂತರ ನಿನ್ನೆ ರಾತ್ರಿ ಕರೆಂಟ್ ಹೋಯಿತು. ಅದರ ಅನ್ವೇಷಣೆಯಾದ ಮೇಲೆ ಕತ್ತಲು ಅನ್ನುವ concept ಬಹುಶ ಕಣ್ಮರೆಯಾಗಿತ್ತು. ಮನೆಯಲ್ಲಿ ಕರೆಂಟ್ ಹೋದರೂ ಹೊರಗೆ ನಿಂತರೆ ಕತ್ತಲ ಆಕಾಶದ ತುಂಬೆಲ್ಲ ಅದರ ಬೆಳಕಿನ ಹಾಸು. ನಿನ್ನೆ ಮಾತ್ರ ಕಾಡಿನ ಮಧ್ಯೆ ಮಾತ್ರ ಸಿಗುವ ಕಗ್ಗತ್ತಲು. ಸುಮ್ಮನೆ ತಲೆಗೆ ಕೈಯಾನಿಸಿಕೊಂಡು ಕೂತವಳಿಗೆ ಅಜ್ಜನ ಮನೆಯ ಕತ್ತಲ ನೆನಪು. ಟಿವಿ ಬರುವ ಮುಂಚೆ ಕರೆಂಟ್ ಇದ್ದರೂ, ಹೋದರೂ ರಾತ್ರಿ ಊಟ ಆದ ಕೂಡಲೇ ನಮ್ಮ ಆಟ ಶುರು. ರಾಮ ಪಗಡೆ, ಕೃಷ್ಣ ಪಗಡೆ, ಚೆನ್ನೆಮಣೆ, ಮಕ್ಕಳಾಡುವ ಕಳ್ಳ-ಕೋತಿ ಇಸ್ಪೀಟು... ವಯಸ್ಸಾಗಿ ಮಗುವಂತಾಗಿದ್ದ ಅಜ್ಜ ನಮ್ಮ ಗುರು. ನಾವು ಸೋತಾಗೆಲ್ಲ ಅವರ ನಗು. ನಾವು ಗೆದ್ದರೆ, ಅವರಿಂದ ಇನ್ನೊಂದು ಆಟಕ್ಕೆ ಪಂಥಾಹ್ವಾನ. ಅವರು ಗೆಲ್ಲುವವರೆಗೂ. ದೊಡ್ಡವರ ರಗಳೆಗೆ ಮಲಗಲು ಓಡುತ್ತಿದ್ದೆವು. ಆಗಿನ ಕಗ್ಗತ್ತಲ ರಾತ್ರಿಯಲ್ಲಿ ಹೆದರಿಕೆಗೆ ಸೆಖೆಯಲ್ಲೂ ಹೊದ್ದುಕೊಂಡ ಹೊದಿಕೆಯ ಘಮ. ಹೊರಗಿಂದ ಸುತ್ತುವರಿದ ಕಾಡಿನ ಚಿತ್ರ-ವಿಚಿತ್ರ ಸದ್ದುಗಳು. ಮೇಲೆ ಹೆಂಚಿನ ಸಂದಿಯಲ್ಲಿ ಆಗೀಗ ಹರಿದಾಡುವ ಹಾವಿನ ಸದ್ದು. ಆದರೂ ಖುಷಿ. 

ಬೆಳಕು

ಮಳೆಯ ನಡುವೆ ಇಣುಕುವ ಸೂರ್ಯನನ್ನು ಹಿಡಿದಿಟ್ಟುಕೊಳ್ಳುವ ಆಸೆ. ಕೈತಪ್ಪಿ ಬಿಟ್ಟರೆ ಎಲ್ಲಿ ಮಾಯವಾಗ್ತಾನೋ ಅನ್ನೋ ಆತಂಕ. ಮನೆಯ ಒಳಗೆಲ್ಲ ಸೂರ್ಯ ಬರೋದು ಹೇಗೆ? ಅವನ ಬೆಳಕನ್ನು ಬೊಗಸೆಯಲ್ಲಿ ತುಂಬಿ ತಂದು ಮನೆಯ ಕೋಣೆಗಳಲ್ಲಿ, ಕವಾಟುಗಳಲ್ಲಿ, ಬಾಗಿಲ ಕತ್ತಲ ಸಂದಿಯಲ್ಲಿ, ಅಟ್ಟದಲ್ಲಿ, ಎಲ್ಲೆಲ್ಲಿ ಅವನಿಗೆ ಪ್ರವೇಶ ನಿಷಿದ್ಧವೋ ಅಲ್ಲೆಲ್ಲ ಚೆಲ್ಲಬೇಕು. ಮನೆಯೊಳಗೆ, ಮನಸ್ಸಿನೊಳಗೆ.