ತುಂಬ ದಿನಗಳ ನಂತರ ನಿನ್ನೆ ರಾತ್ರಿ ಕರೆಂಟ್ ಹೋಯಿತು. ಅದರ ಅನ್ವೇಷಣೆಯಾದ ಮೇಲೆ ಕತ್ತಲು ಅನ್ನುವ concept ಬಹುಶ ಕಣ್ಮರೆಯಾಗಿತ್ತು. ಮನೆಯಲ್ಲಿ ಕರೆಂಟ್ ಹೋದರೂ ಹೊರಗೆ ನಿಂತರೆ ಕತ್ತಲ ಆಕಾಶದ ತುಂಬೆಲ್ಲ ಅದರ ಬೆಳಕಿನ ಹಾಸು. ನಿನ್ನೆ ಮಾತ್ರ ಕಾಡಿನ ಮಧ್ಯೆ ಮಾತ್ರ ಸಿಗುವ ಕಗ್ಗತ್ತಲು. ಸುಮ್ಮನೆ ತಲೆಗೆ ಕೈಯಾನಿಸಿಕೊಂಡು ಕೂತವಳಿಗೆ ಅಜ್ಜನ ಮನೆಯ ಕತ್ತಲ ನೆನಪು.
ಟಿವಿ ಬರುವ ಮುಂಚೆ ಕರೆಂಟ್ ಇದ್ದರೂ, ಹೋದರೂ ರಾತ್ರಿ ಊಟ ಆದ ಕೂಡಲೇ ನಮ್ಮ ಆಟ ಶುರು. ರಾಮ ಪಗಡೆ, ಕೃಷ್ಣ ಪಗಡೆ, ಚೆನ್ನೆಮಣೆ, ಮಕ್ಕಳಾಡುವ ಕಳ್ಳ-ಕೋತಿ ಇಸ್ಪೀಟು... ವಯಸ್ಸಾಗಿ ಮಗುವಂತಾಗಿದ್ದ ಅಜ್ಜ ನಮ್ಮ ಗುರು. ನಾವು ಸೋತಾಗೆಲ್ಲ ಅವರ ನಗು. ನಾವು ಗೆದ್ದರೆ, ಅವರಿಂದ ಇನ್ನೊಂದು ಆಟಕ್ಕೆ ಪಂಥಾಹ್ವಾನ. ಅವರು ಗೆಲ್ಲುವವರೆಗೂ. ದೊಡ್ಡವರ ರಗಳೆಗೆ ಮಲಗಲು ಓಡುತ್ತಿದ್ದೆವು. ಆಗಿನ ಕಗ್ಗತ್ತಲ ರಾತ್ರಿಯಲ್ಲಿ ಹೆದರಿಕೆಗೆ ಸೆಖೆಯಲ್ಲೂ ಹೊದ್ದುಕೊಂಡ ಹೊದಿಕೆಯ ಘಮ. ಹೊರಗಿಂದ ಸುತ್ತುವರಿದ ಕಾಡಿನ ಚಿತ್ರ-ವಿಚಿತ್ರ ಸದ್ದುಗಳು. ಮೇಲೆ ಹೆಂಚಿನ ಸಂದಿಯಲ್ಲಿ ಆಗೀಗ ಹರಿದಾಡುವ ಹಾವಿನ ಸದ್ದು. ಆದರೂ ಖುಷಿ.

Thank you Shwetha for bringing back some memories.
ReplyDelete