ಪಾಸು-ಫೇಲು
ಶಾಲೆಯಲ್ಲಿ ಫಲಿತಾಂಶ ಹೊರಬಿತ್ತು.
ಮೇಷ್ಟ್ರು ಹೇಳಿದರು ‘‘ನೀನು ಪಾಸು’’
ಹುಡುಗ ಕುಣಿಯುತ್ತಾ ಶಾಲೆಯಿಂದ ಹೊರ ಬಿದ್ದ.
ದಾರಿಯಲ್ಲಿ ಹೀಗೆ ನಡೆಯುತ್ತಾ ಹೋಗುವಾಗ ಒಂದು ಮರ ಕೇಳಿತು... ‘‘ನನ್ನನ್ನು ನೀನು ಹತ್ತ ಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ.
ತಲೆ ಕುಣಿಸುತ್ತಿದ್ದ ಹೂವಿನ ಗಿಡ ಕೇಳಿತು ‘‘ಈ ಹೂವಿನ ಹೆಸರು ಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ.
ಅಲ್ಲೇ ಬಿದ್ದಿದ್ದ ಸೈಕಲ್ ಕೇಳಿತು ‘‘ನನ್ನನ್ನು ನೀನು ತುಳಿಯ ಬಲ್ಲೆಯ?’’ಹುಡುಗ ‘‘ಇಲ್ಲ’’ ಎಂದ.
ಮುಂದೆ ನದಿಯೊಂದು ಎದುರಾಯಿತು. ಕೇಳಿತು ‘‘ನನ್ನನ್ನು ನೀನು ಈಜಬಲ್ಲೆಯಾ?’’ಹುಡುಗ ‘‘ಇಲ್ಲ’’ ಎಂದ. ತೂಗಾಡುತ್ತಿದ್ದ ಮಾವಿನ ಗೊಂಚಲು ಕೇಳಿತು ‘‘ನನ್ನನ್ನು ನೀನು ಉದುರಿಸಬಲ್ಲೆಯ?’’ಹುಡುಗ ‘‘ಇಲ್ಲ’’ ಎಂದ.ಎದುರಾದ ಬೆಟ್ಟ ಕೇಳಿತು ‘‘ನನ್ನನ್ನು ನೀನು ಏರ ಬಲ್ಲೆಯ?’’
ಹುಡುಗ ‘‘ಇಲ್ಲ’’ ಎಂದ.
ಬದುಕು ಹೇಳಿತು ‘‘ಹಾಗಾದರೆ ನೀನು ಫೇಲು’’
ಇದನ್ನು ನಾನು ಓದಿದ್ದು ಬರಹಗಾರ ಬಶೀರ್ ಅವರ ಬ್ಲಾಗ್‌ನಲ್ಲಿ (ಗುಜರಿ ಅಂಗಡಿ). ಅಮ್ಮಂಗೆ ಓದಿ ಹೇಳಿದಾಗ ಅವಳು ನನ್ನನ್ನು ಛೇಡಿಸೋಕೆ, ನೀನೂ ಜೀವನದಲ್ಲಿ ಫೇಲ್ ಅಂದಳು. ಅದಕ್ಕೆ ನಾನಂದೆ, ನಾನು ಫೇಲ್ ಆಗೋಕೆ ಸಾಧ್ಯಾನೇ ಇಲ್ಲ, ಯಾಕೆಂದರೆ ನಾನು ಬೆಳಗ್ಗೆ ಸಿಹಿನಿದ್ರೆಯಿಂದ ಕಷ್ಟಪಟ್ಟು ಏಳೋದನ್ನು, ಬಿಸಿ ಬಿಸಿ ಸ್ನಾನವನ್ನು, ಹಸಿದಾಗ ಹೊಟ್ಟೆ ತುಂಬ ತಿನ್ನೋದನ್ನು, ಬೆಳಗಿನ ತಣ್ಣನೆ ವಾತಾವರಣದಲ್ಲಿ ಬಸ್ಸಿಗೆ ಓಡೋದನ್ನು ಖುಶಿಯಿಂದ ಅನುಭವಿಸ್ತೀನಿ; ಒಬ್ಬಳೇ ಖಾಲಿ ರಸ್ತೆಯಲ್ಲಿ ನಡೆವಾಗ, ಮೈಸೂರಿನ ಹೇಳದೆ ಕೇಳದೆ ಬರುವ ಮಳೆಯಲ್ಲಿ ನೆನೆಯೋದನ್ನು, ನನ್ನ ತಲೆಯೊಳಗಿರುವ ಅನಿಸಿಕೆಗಳನ್ನು ಕಾಗದದ ಮೇಲೆ ಇಳಿಸುವಾಗ, ಆಗ ಖಾಲಿ ಹಾಳೆಯ ಮೇಲೆ ಮೂಡುವ ಅಕ್ಷರಗಳನ್ನು ಬೆರಗಿನಿಂದ ನೋಡ್ತೀನಿ; ಬಾಯಿಯಲ್ಲಿ ಬೇರೆಯವರ ಜೊತೆ ಚರ್ಚೆ ಮಾಡುತ್ತಿದ್ದರೂ ತಲೆಯೊಳಗೆ ತನ್ನಂತಾನೆ ಮೂಡುವ ಆಲೋಚನೆಗಳ ಬಗ್ಗೆ ಅಚ್ಚರಿ ಪಡ್ತೀನಿ; ನನ್ನ ಗೆಳತಿ ಜೊತೆ ದಿನಾ ಕೈ ಹಿಡಿದುಕೊಂಡು ಬಸ್‌ಸ್ಟಾಂಡ್‌ನಲ್ಲಿ ಬಸ್ಸಿಗೆ ಹತ್ತಿದಾಗ ಸೀಟು ಸಿಕ್ಕಿದಾಗ ಆದ ಖುಶಿಗೆ ಆಶ್ಚರ್ಯ ಪಡ್ತೀನಿ; ಒಂದೊಂದು ಕಥೆ ಓದುವಾಗಲೂ ಅದರೊಳಗಿರುವ ಆಲೋಚನೆಗಳು ಮನುಷ್ಯನ ಮನಸ್ಸಿನಲ್ಲಿ ಅದು ಹೇಗೆ ಮೂಡುತ್ತವೆ ಅನ್ನಿಸಿ ಅಚ್ಚರಿ ಪಡ್ತೀನಿ. ಸುಸ್ತಾಗಿ ಮಲಗುವಾಗ ಹಾಯೆನಿಸಿ ಆ ಹಾಸಿಗೆಯ ಮೃದುತ್ವಕ್ಕೆ ಮಾರುಹೋಗ್ತೀನಿ. ಕಾಡಿಗೆ ಹೋದಾಗ ನನ್ನನ್ನೇ ದುರುಗುಟ್ಟಿಕೊಂಡು ನೋಡಿದ ಹಸಿರು ಹಾವನ್ನು ಮಾತಾಡಿಸಿ ಖುಶಿಪಡ್ತೀನಿ. ಜೀವನದ ಪ್ರತಿ ಸಣ್ಣ ವಸ್ತುವನ್ನು, ಬೆಳವಣಿಗೆಯನ್ನು ಅನುಭವಿಸುವ ಆಸಕ್ತಿ ಇರುವವರೆಗೆ ನಾನು ಫೇಲ್ ಆಗೋದಿಲ್ಲ ಅಂದುಕೊಂಡಿದ್ದೇನೆ. ನೀವೇನಂತೀರಾ?

ನೋವಿಲ್ಲದ ಬದುಕು,
ReplyDeleteತಿರುಳಿಲ್ಲದ ಅಂತರಂಗ,
ಜಗತ್ತಿನ ಬೇನೆ ಅರಿಯದು.
ಅದಕ್ಕೆಜೀವನದ ಅರ್ಥ ತಿಳಿಯದು.
ತುಂಬಾ ಚೆನ್ನಾಗಿ ಬರೆದಿದ್ದೀರಾ. ನನಿಗೆ ನಿಮ್ಮ ಇಂಗ್ಲಿಷ್ ಬರಹಕ್ಕಿಂತ ಕನ್ನಡ ಬರಹ ಚೆನ್ನಾಗಿದೆ ಅಂತ ಅನಿಸುತ್ತದೆ. You express yourself very clearly while writing in Kannada as against English. I could be wrong, but that is what I feel after reading your writings in Kannada.
ReplyDeleteNeenu sari, Nimmamma thappu antheeni!
ReplyDeletenobody, just none, can fail on their own - its the others and their expectations that fail us ... what more, when we grow to be strangers to ourselves, even our own expectations fail us!!